Please enable javascript.

ಐಟಿಆರ್ ಫೈಲಿಂಗ್‌ : ಯಾವ ಫಾರ್ಮ್‌ ಆಯ್ಕೆ ಮಾಡಿಕೊಳ್ಳಬೇಕು? ವೇತನ ವರ್ಗಕ್ಕೆ, ವ್ಯಾಪಾರಿಗಳಿಗೆ ಯಾವ ಆಯ್ಕೆ?

Authored by ಸಾಗರ್‌ ಕನ್ನೆಮನೆ | The Economic Times Kannada | Updated: 29 Jun 2024, 9:58 am

IT Returns : ಐಟಿಆರ್‌ ಫೈಲಿಂಗ್‌ ಮುಂದಿನ ತಿಂಗಳು ಅಂದ್ರೆ ಜುಲೈ 31 ಅಂತಿಮ ದಿನವಾಗಿದೆ. ನೀವು ಇನ್ನೂ ಐಟಿ ಫೈಲ್ ಮಾಡದಿದ್ರೆ ಮರೆಯದೇ ಜುಲೈ ತಿಂಗಳಿನ ಒಳಗೆ ಫೈಲ್ ಮಾಡಿ. ತೆರಿಗೆ ಕಾನೂನುಗಳಿಗೆ ಅನುಸಾರವಾಗಿ ಉಳಿಯಲು ಮತ್ತು ಪೆನಾಲ್ಟಿಗಳನ್ನು ತಪ್ಪಿಸಲು ನಿಮ್ಮ ಐಟಿಆರ್ ಫೈಲ್ ಮಾಡುವುದು ಅತ್ಯಗತ್ಯ. ಆದ್ರೆ ಐಟಿಆರ್‌ನ ಯಾವ ಫಾರ್ಮ್‌ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಯಿರಿ.

 
ITR Filing
ಐಟಿಆರ್‌ನ ಯಾವ ಫಾರ್ಮ್‌ ಆಯ್ಕೆ ಮಾಡಿಕೊಳ್ಳಬೇಕು?

ಹೈಲೈಟ್ಸ್‌:

  • ಐಟಿ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಅಂತಿಮ ಡೆಡ್‌ಲೈನ್‌
  • ಹಣಕಾಸು ವರ್ಷ 2023-24 ಮತ್ತು ಮೌಲ್ಯಮಾಪನ ವರ್ಷ 2024-25 ಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ
  • ಐಟಿಆರ್‌ನ ಯಾವ ಫಾರ್ಮ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯಿರಿ
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು, ಐಟಿಆರ್ ಫಾರ್ಮ್‌ಗಳ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಆದಾಯ ತೆರಿಗೆ ರಿಟರ್ನ್ಸ್‌ನ ಆನ್‌ಲೈನ್ ಫೈಲಿಂಗ್ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸರಳವಾಗಿದ್ದು, ತೆರಿಗೆ ವೃತ್ತಿಗಾರರ ಮೇಲೆ ಅವಲಂಬಿತರಾಗುವ ಬದಲು ವ್ಯಕ್ತಿಗಳು ಅದನ್ನು ಸ್ವತಃ ಮಾಡಲು ಅನುವು ಮಾಡಿಕೊಡುತ್ತದೆ.

ಜುಲೈ 31 ಐಟಿಆರ್ ಫೈಲ್ ಮಾಡಲು ಡೆಡ್‌ಲೈನ್‌


ಸದ್ಯ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ನೀವು ಹಣಕಾಸು ವರ್ಷ 2023-24 ಮತ್ತು ಮೌಲ್ಯಮಾಪನ ವರ್ಷ 2024-25 ಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಯಸಿದರೆ, ನಂತರ ನೀವು ಮನೆಯಲ್ಲಿ ಕುಳಿತು ಮಾಡಬಹುದು, ಆದರೆ ಜನರು ಐಟಿಆರ್ ಫಾರ್ಮ್ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.


ಆದಾಯ ತೆರಿಗೆ ಇಲಾಖೆಯು ಒಟ್ಟು ಏಳು ವಿಧದ ITR ಫಾರ್ಮ್‌ಗಳನ್ನು ಸೂಚಿಸಿದೆ - ITR-1, ರಿಂದ ITR-7ವರೆಗೆ ವಿವಿಧ ರೀತಿಯ ಫಾರ್ಮ್‌ಗಳು ವಿವಿಧ ರೀತಿಯಲ್ಲಿ ಅವಲಂಬಿಸಿರುತ್ತದೆ. ITR-1 ಫಾರ್ಮ್‌ನ ಹೆಸರು ಸಹಜ್, ITR-2, ITR-3 ಮತ್ತು ITR-4 (ಸುಗಮ್).

ಜುಲೈ 31ರ ಡೆಡ್‌ಲೈನ್‌ಗೂ ಮುನ್ನ IT ರಿಟರ್ನ್ಸ್‌ ಏಕೆ ಫೈಲ್‌ ಮಾಡಬೇಕು? 5 ಕಾರಣಗಳು ಇಲ್ಲಿವೆ!

ITR-1 ಮತ್ತು ITR-2 ಫಾರ್ಮ್‌ಗಳನ್ನು ಸಂಬಳದ ವರ್ಗಕ್ಕಾಗಿ ಮಾಡಲಾಗಿದೆ. 50 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸಂಬಳ ಪಡೆಯುವ ವರ್ಗದ ವ್ಯಕ್ತಿಗಳಿಗೆ ಸರಳ ರೂಪವಿದೆ. ಇದರಲ್ಲಿ ನಿಮ್ಮ ಕೃಷಿ ಆದಾಯ ರೂ 5,000 ಮೀರಬಾರದು. ಈ ಆದಾಯವು ಎಫ್‌ಡಿ, ಉಳಿತಾಯ ಖಾತೆ ಇತ್ಯಾದಿಗಳಿಂದ ಬರುವ ಆದಾಯವನ್ನು ಸಹ ಒಳಗೊಂಡಿದೆ.


ITR-2 ಫಾರ್ಮ್ ಯಾರು ಬಳಸಬೇಕು?


50 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವ ವರ್ಗವು ITR-2 ಫಾರ್ಮ್ ಅನ್ನು ಬಳಸಬೇಕಾಗುತ್ತದೆ.


ITR-3 ಫಾರ್ಮ್‌ ಬಳಕೆ ಯಾರಿಗೆ?

ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಗಳಿಸುವ ವ್ಯಕ್ತಿಗಳು ITR ಫಾರ್ಮ್-3 ಅನ್ನು ಬಳಸಬಹುದು. ಇದರಲ್ಲಿ ವ್ಯಕ್ತಿಯ ಗಳಿಕೆಯು ವ್ಯಾಪಾರದ ಮೂಲಕ ಆಗಿರಬೇಕು.

ITR-4 ಯಾರಿಗೆ ಅನ್ವಯ?

ITR-4 (ಸುಗಮ್) ಸಣ್ಣ ಉದ್ಯಮಿಗಳು ಮತ್ತು ವೃತ್ತಿಪರರಿಗೆ. 50 ಲಕ್ಷದವರೆಗಿನ ಆದಾಯ ಹೊಂದಿರುವ ಸಣ್ಣ ಉದ್ಯಮಿಗಳು ಈ ಫಾರ್ಮ್ ಅನ್ನು ಬಳಸಬಹುದು. ಈ ಫಾರ್ಮ್ ಮೂಲಕ ನೀವು ವ��ಯಾಪಾರ ಅಥವಾ ವೃತ್ತಿಯಿಂದ ನಿಮ್ಮ ಆದಾಯವನ್ನು ಊಹೆಯ ಆಧಾರದ ಮೇಲೆ ಘೋಷಿಸಬಹುದು.

Personal Finance ಮತ್ತು ಆದಾಯ ತೆರಿಗೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ಅಪ್‌ಡೇಟ್‌ ಕುರಿತು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ತಿಳಿಯಿರಿ
ಸಾಗರ್‌ ಕನ್ನೆಮನೆ ಅವರ ಬಗ್ಗೆ
ಸಾಗರ್‌ ಕನ್ನೆಮನೆ
ಸಾಗರ್‌ ಕನ್ನೆಮನೆ Senior Digital Content Producer
ದಿ ಎಕನಾಮಿಕ್ ಟೈಮ್ಸ್‌ ಕನ್ನಡ'ದಲ್ಲಿ ಹಿರಿಯ ಡಿಜಿಟಲ್ ಪತ್ರಕರ್ತರಾಗಿ 2023 ಜನವರಿಯಿಂದ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 11 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಮುಖವಾಗಿ ಆರ್ಥಿಕತೆ, ಹಣಕಾಸು ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಇವರ ಆಸಕ್ತಿಯ ವಿಷಯಗಳು. ಬೆಟ್ಟ, ಗುಡ್ಡಗಳ ಚಾರಣ, ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ಮೆಚ್ಚಿನ ಹವ್ಯಾಸಗಳು.Read More