ವಿಷಯಕ್ಕೆ ಹೋಗು

ಕಾಪ್ರೋಯಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
ಕಾಪ್ರೋಯಿಕ್ ಆಮ್ಲ
Skeletal formula
Ball-and-stick model
ಹೆಸರುಗಳು
ಐಯುಪಿಎಸಿ ಹೆಸರು
Hexanoic acid
Other names
Caproic acid; n-Caproic acid; C6:0 (Lipid numbers)
Identifiers
ECHA InfoCard 100.005.046
ಗುಣಗಳು
ಆಣ್ವಿಕ ಸೂತ್ರ C6H12O2
ಮೋಲಾರ್ ದ್ರವ್ಯರಾಶಿ ೧೧೬.೧೬ g mol−1
Appearance నూనెలాంటి ద్రవం[೧]
ಸಾಂದ್ರತೆ 0.93 g/cm3[೨]
ಕರಗು ಬಿಂದು

−3.4 °C, 270 K, 26 °F ([೧])

ಕುದಿ ಬಿಂದು

205 °C, 478 K, 401 °F ([೧])

ಕರಗುವಿಕೆ ನೀರಿನಲ್ಲಿ 1.082 g/100 g[೧]
ಅಮ್ಲತೆ (pKa) 4.88
Hazards
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಕಾಪ್ರೋಯಿಕ್ ಆಮ್ಲವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ವೋನೋಕಾರ್ಬೋಕ್ಸಿಲಿಕ್ ಆಮ್ಲಗಳ ಸಮೂಹಕ್ಕೆ ಸೇರಿದ ಕಾರ್ಬನ ರಸಾಯನ ಆಮ್ಲವಾಗಿದೆ. ಇದು ಜಂತು/ಜೀವಿಗಳ ಕೊಬ್ಬಿನಲ್ಲಿ ಹೆಚ್ಚಾಗಿ ಕಾಣಿಸುವ ಪರ್ಯಾಪ್ತ ಕೊಬ್ಬಿನ ಆಮ್ಲ. [೩]

ಕಾರ್ಪೋಯಿಕ್ ಆಮ್ಲ ನಿರ್ಮಾಣ

ಕಾಪ್ರೋಯಿಕ್ ಆಮ್ಲ ಸರಳವಾದ ಹೈಡ್ರೋಕಾರ್ಬನ್ ಸರಪಳಿಯನ್ನು ಹೊಂದಿರುತ್ತದೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಆಮ್ಲದಲ್ಲಿ ಕಾರ್ಬನ್ , ಹೈಡ್ರೋಜನ್, ಆಕ್ಸಿಜನ್ ಗಳಿರುತ್ತವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್-ಕಾರ್ಬನ್ ಕಡಿಮೆ ಏಕ ಬಂಧವಿರುತ್ತವೆ. ಏಕ ಬಂಧ ವಿರುವ ಕೊಬ್ಬಿನ ಆಮ್ಲಗಳನ್ನು ಪರ್ಯಾಪ ಕೊಬ್ಬಿನ ಆಮ್ಲಗಳು ಎಂದು ಕರೆಯುತ್ತರೆ. ಕಾಪ್ರೋಯಿಕ್ ಆಮ್ಲದ ಅಣುವಿನಲ್ಲಿ ೬ ಕಾರ್ಬನ್, ೧೨ ಹೈಡ್ರೋಜನ್,೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ C5H11COOH. ಇನ್ನೊಂದು ತರಹ ಅಣು ಸಂಕೇತವು C6</ sub>H 12O2ಆಗಿದೆ. ಕಾಪ್ರೋಯಿಕ್ ಆಮ್ಲದ ಶಾಸ್ತ್ರೀಯ ಹೆಸರು ಹೆಕ್ಸೆನೋಯಿಕ್ ಆಸಿಡ್(hexanoic acid). ೮ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರೀಲಿಕ್ ಆಮ್ಲವೆಂದು, ೧೦ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರಿಕ್ ಆಮ್ಲವೆಂದು ಕರೆಯಲಾಗುತ್ತದೆ. ಈ ಮೂರು ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ಕಾಣಿಸುತ್ತವೆ. ಲಾಟಿನ್ ಭಾಷೆಯಲ್ಲಿ ಕಾಪರ್(caper) ಎಂದರೆ ಮೇಕೆ ಎಂದರ್ಥ.

ಆಮ್ಲದ ಭೌತಿಕ ಲಕ್ಷಣಗಳ ಪಟ್ಟಿ[೪]

ಲಕ್ಷಣ ಮಿತಿ
ಅಣು ಸಂಕೇತ ಸೂತ್ರ C5H11COOH
ಶಾಸ್ತ್ರೀಯ ಹೆಸರು Hexanoic acid
ಅಣು ಭಾರ 116.15
ದ್ರವೀಭವನ ಬಿಂದು -೪C
ಭಾಷ್ಪೀಭವನ ಬಿಂದು 202-203 °C
ಫ್ಲಾಷ್ ಪಾಯಿಂಟ್ 104 °C
ವಿಶಿಷ್ಟ ಗುರುತ್ವ 0.929 ಕೇ.ಜಿ./ಲೀ
ವಕ್ರೀಭವನ ಸೂಚಕ ೧.೪೧೬೨

ಕಾಪ್ರೋಯಿಕ್ ಆಮ್ಲವನ್ನು ಕೆಳಗಿನ ಹೆಸರುಗಳಲ್ಲಿ ಕರೆಯಲಾಗುತ್ತದೆ

  • n-Caproic acid
  • Capronic acid
  • n-Hexanoic acid
  • Hexoic acid
  • Butylacetic acid
  • n-Hexylic acid

ಕಾಪ್ರೋಯಿಕ್ ಆಮ್ಲವು ಬಿಳುಪಾದ ಸ್ಪಟಿಕ ರೂಪದಲ್ಲಿರುತ್ತದೆ. ಕೆಟ್ಟ ವಾಸನೆ ಹೊಂದಿರುತ್ತದೆ.

ಉಪಯುಕ್ತಗಳು

  • ಹಸುರು ಮೇವು(silage)ಎಯಿರೊಬಿಕ್(aerobic) ಚರ್ಯೆ ಕಾರಣದಿಂದ ಹದಗೆಡುವುದನ್ನು ಕಾರ್ಪ್ರೊಯಿಕ್ ಆಮ್ಲ ತಡೆಯುತ್ತದೆ[೫]
  • ಆಹಾರ ಪದಾರ್ಥಗಳಲ್ಲಿ ಸುವಾಸನೆ ಬರುವುದಕ್ಕೆ ಇದನ್ನು ಉಪಯೋಗಿಸಲಾಗುತ್ತದೆ[೬]

ತೊಂದರೆಗಳು

  • ಕಾಪ್ರೊಯಿಕ್ ಆಮ್ಲದಿಂದ ಕೆಳವು ತೊಂದರೆಗಳು ಇವೆ. ನೇರವಾಗಿ ಕಣ್ಣುಗಳಲ್ಲಿ ಬಿದ್ದರೆ, ಇಲ್ಲವೆ ಚರ್ಮದ ಮೇಲೆ ಅಂಟಿಕೊಂಡಿದ್ದರೆ ಉರಿಯುತ್ತದೆ. ಇದರ ಭಾಷ್ಪವನ್ನು ಶ್ವಾಸಿಸುವುದರಿಂದ ಉಸಿರಿನ ತೊಂದರೆ ಉಂಟಾಗುತ್ತದೆ[೭]

ಇವನ್ನೂ ನೋಡಿ

  1. ಕೊಬ್ಬಿನ ಆಮ್ಲ
  2. ಪರ್ಯಾಪ್ತ ಆಮ್ಲ

ಬಾಹ್ಯಾಕೊಂಡಿಗಳು

  1. http://www.chemspider.com/Chemical-Structure.8552.html

ಉಲ್ಲೇಖನ

  1. ೧.೦ ೧.೧ ೧.೨ ೧.೩ ಟೆಂಪ್ಲೇಟು:Merck11th
  2. ೨.೦ ೨.೧ ಟೆಂಪ್ಲೇಟು:GESTIS
  3. [http:// www.thefreedictionary. com/caproic+acid "caproic acid"]. thefreedictionary.com. Retrieved 2013-12-2. {{cite web}}: Check |url= value (help); Check date values in: |accessdate= (help)
  4. "Hexanoic acid". www.chemspider.com/. Retrieved 2013-12-2. {{cite web}}: Check date values in: |accessdate= (help)
  5. "The use of caproic acid". onlinelibrary.wiley.com/. Retrieved 2013-12-2. {{cite web}}: Check date values in: |accessdate= (help)
  6. "caproic acid". dictionary.reference.com/. Archived from the original on 2015-01-24. Retrieved 2013-12-2. {{cite web}}: Check date values in: |accessdate= (help)
  7. @term+@ DOCNO+6813 "HEXANOIC ACID". toxnet.nlm.nih.gov/. Retrieved 2013-12-2. {{cite web}}: Check |url= value (help); Check date values in: |accessdate= (help)